ಆಯುರ್ವೇದವು ಆರೋಗ್ಯವನ್ನು ಕಾಪಾಡಿಕೊಳ್ಳವುದು ಮತ್ತು ರೋಗಗಳ ಚಿಕಿತ್ಸೆ – ಎರಡಕ್ಕೂ ಸಮಾನ ಪ್ರಾಮುಖ್ಯತೆಯನ್ನು ನೀಡುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ನಿದ್ರೆ, ಆಹಾರ ಪದ್ಧತಿ, ಲೈಂಗಿಕತೆ ಮುಂತಾದ ಪ್ರತಿಯೊಂದು ವಿಚಾರಗಳು ಹೇಗಿರಬೇಕು ಎಂಬುವುದರ ಬಗ್ಗೆ ನಿಖರವಾದ ವಿವರಣೆಯನ್ನು ನೀಡುತ್ತದೆ.

Click to buy from within India
Click to buy from Outside India
ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವ ಮೂಲಕ ಹೆಚ್ಚಿನ ರೋಗಗಳನ್ನು ತದೆಹಟ್ಟಲು ಸಾಧ್ಯ. ವ್ಯಾಯಾಮ, ಮದ್ಯಪಾನ, ಯೋಗ, ಪ್ರಾಣಾಯಾಮ, ಅಧಿಕ ತೂಕ – ಪರಿಹಾರಗಳು, ವಿವಿಧ ರೀತಿಯ ಉಪವಾಸಗಳು, ಶೀತ ದೇಶಗಳಲ್ಲಿ ವಾಸಿಸುವ ಜನರು ಆರೋಗ್ಯ ರಕ್ಷಣೆಯನ್ನು ಮಾಡಲು ಅನುಸರಿಸಬೆಕಾದ ಮಾರ್ಗಗಳು, ತೆಂಗಿನ ಎಣ್ಣೆ, ಎಳ್ಳೆಣ್ಣೆ ಮುಂತಾದವುಗಳನ್ನು ಬಳಸುವ ಸರಿಯಾದ ವಿಧಾನ, ಆರೋಗ್ಯವನ್ನು ಸುಧಾರಿಸಲು ಅರಿಶಿನ, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ ಇತ್ಯಾದಿಗಳ ಬಳಕೆ, ಮಾನಸಿಕ ಆರೋಗ್ಯವನ್ನು ಸುಧಾರಿಸುವ ಮಾರ್ಗಗಳು, ಮಕ್ಕಳಲ್ಲಿ ಏಕಾಗ್ರತೆಯನ್ನು ಸುಧಾರಿಸುವ ವಿಧಾನ, ವಯಸ್ಸಾದವರಲ್ಲಿ ಸ್ಮರಣಶಕ್ತಿ ನಷ್ಟ ಮತ್ತು ಅದರ ಪರಿಹಾರಗಳು -ಮುಂತಾದ ವಿಚಾರಗಳ ಬಗೆಗಿನ ಸರಳ ವಿವರಣೆಯನ್ನು ಈ ಪುಸ್ತಕವು ಒಳಗೊಂಡಿದೆ.
ಜನಸಾಮಾನ್ಯರಿಗೆ ಉಪಯುಕ್ತವಾದ ಆಯುರ್ವೇದದ ಪ್ರಾಚೀನ ತತ್ವಗಳನ್ನು ಸರಳ ರೀತಿಯಲ್ಲಿ ಈ ಪುಸ್ತಕದಲ್ಲಿ ಸೇರ್ಪಡೆಗೊಳಿಸಲಾಗಿದೆ.
ಆಯುರ್ವೇದ ತತ್ವಗಳನ್ನು ದೈನಂದಿನ ದಿನಚರಿಯ ಭಾಗವಾಗಿ ಮಾಡಿಕೊಂಡು ಆರೋಗ್ಯಕರ ಜೀವನವನ್ನು ನಡೆಸಲು ಈ ಪುಸ್ತಕವು ನಿಮಗೆ ಸಹಾಯ ಮಾಡಬಲ್ಲದು ಎನ್ನುವುದರಲ್ಲಿ ಎರಡು ಮಾತಿಲ್ಲ.