ನಮಸ್ತೆ 🙂
ಈಜ಼ಿ ಆಯುರ್ವೇದದ ಕನ್ನಡ ವಿಭಾಗಕ್ಕೆ ನಿಮಗೆ ಸ್ವಾಗತ 🙂
Table of Contents
ಈಜ಼ಿ ಆಯುರ್ವೇದ ಕನ್ನಡ ಯೂಟ್ಯೂಬ್ ಚಾನೆಲ್:
ಪುಸ್ತಕದಲ್ಲಿ ಇರುವ ಪ್ರಮುಖ ವಿಷಯಗಳು:
ಗಿಡಮೂಲಿಕೆಗಳ ಕಷಾಯ, ಕಷಾಯ, ಮೂಲಿಕೆ ಕೂದಲು ತೈಲಗಳು, ಸಿರಪ್ಗಳು ಇತ್ಯಾದಿಗಳ ತಯಾರಿಕೆಯ ಹಿಂದಿನ ಆಯುರ್ವೇದ ತತ್ವಗಳು.
ಈ ಸಿದ್ಧತೆಗಳಲ್ಲಿ ಅನುಸರಿಸಬೇಕಾದ ಗಿಡಮೂಲಿಕೆಗಳು, ನೀರು, ಎಣ್ಣೆ, ತುಪ್ಪ ಇತ್ಯಾದಿಗಳ ಸೂತ್ರಗಳು ಮತ್ತು ಅನುಪಾತಗಳು.
ಪ್ರತಿ ಔಷಧ ರೂಪಗಳ ಉದಾಹರಣೆಗಳು ಮತ್ತು ತಯಾರಿಕಾ ವಿಧಾನ.
ತುಪ್ಪ, ಜೇನುತುಪ್ಪ, ಬೆಳ್ಳುಳ್ಳಿ, ಅರಿಶಿನ ಮುಂತಾದ ಮನೆಯ ಪದಾರ್ಥಗಳು.
ಶುಂಠಿ, ಜೀರಿಗೆ, ಕರಿಮೆಣಸು ಮತ್ತು ಲವಂಗದಂತಹ ಮಸಾಲೆಗಳು.
ದ್ವಿದಳ ಧಾನ್ಯಗಳಾದ ಕಾಳುಗಳು, ಹಸಿಬೇಳೆ, ಹೆಸರುಕಾಳು, ಇತ್ಯಾದಿಗಳ ಮನೆಮದ್ದುಗಳು,
ಬೆಣ್ಣೆ, ತುಪ್ಪ ಮತ್ತು ಮೊಸರು ಮುಂತಾದ ಡೈರಿ ಉತ್ಪನ್ನಗಳು.
ಒಣ ಹಣ್ಣುಗಳು ಮತ್ತು ಬೀಜಗಳಾದ ವಾಲ್ನಟ್ಸ್, ಖರ್ಜೂರ, ಬಾದಾಮಿ ಮತ್ತು ಒಣದ್ರಾಕ್ಷಿ.
ಹಣ್ಣುಗಳಾದ ಅನಾನಸ್, ಸೀತಾಫಲ, ಬಾಳೆಹಣ್ಣು ಮತ್ತು ಮಾವು.
ಬೆಂಡೆಕಾಯಿ, ಸೌತೆಕಾಯಿ, ಮೂಲಂಗಿ, ಕ್ಯಾರೆಟ್ ಮತ್ತು ಹೆಚ್ಚಿನ ತರಕಾರಿಗಳು!
ಪ್ರಾಚೀನ ಆಯುರ್ವೇದ ಪಠ್ಯಪುಸ್ತಕಗಳಿಂದ ಆಯ್ದ ಮನೆಮದ್ದುಗಳು – ಚರಕ ಸಂಹಿತೆ, ಸುಶ್ರುತ ಸಂಹಿತೆ, ಅಷ್ಟಾಂಗ ಹೃದಯಂ ಇತ್ಯಾದಿ.
ಯಾವ ನಿರ್ದಿಷ್ಟ ರೋಗಲಕ್ಷಣಗಳಲ್ಲಿ, ರೋಗದ ಯಾವ ಹಂತದಲ್ಲಿ ಪರಿಹಾರಗಳು ಎಷ್ಟು ನಿಖರವಾಗಿ ಉಪಯುಕ್ತವಾಗಿವೆ ಎಂಬುದರ ವಿವರಣೆ
ಸೋಲಿಗ, ಗುಣಿ ಮೊದಲಾದ ಸಮುದಾಯಗಳಿಂದ ಜಾನಪದ, ಬುಡಕಟ್ಟು ಮನೆಮದ್ದುಗಳು.
ಈಝೀ ಅಯುರ್ವೇದ ಪ್ರಸ್ತುತ ಪಡಿಸುತ್ತಿರುವ ಹೊಚ್ಚ ಹೊಸ ಕನ್ನಡ ಪುಸ್ತಕ “ಸುಗಮ ಜೀವನಕ್ಕಾಗಿ ಅಯುರ್ವೇದ”. ಇದು ಆರೋಗ್ಯಕರ, ಉತ್ಸಾಹಭರಿತ ಜೀವನವನ್ನು ನಡೆಸಲು ನಿಮ್ಮ ಜೀವನದಲ್ಲಿ ನೀವು ಸುಲಭವಾಗಿ ಅಳವಡಿಸಿಕೊಳ್ಳಬಹುದಾದ ಹಲವಾರು ಆಯುರ್ವೇದ ಸಲಹೆಗಳನ್ನು ಒಳಗೊಂಡಿದೆ. ಅಲ್ಲದೆ ಈ ಪುಸ್ತಕದಲ್ಲಿ ಉಲ್ಲೇಖಿಸಲ್ಪಟ್ಟಿರುವ ವಿಚಾರಗಳು ಆಯುರ್ವೇದದ ಮೂಲಭೂತ ತತ್ವಗಳನ್ನು ಆಧಾರಿತವಾಗಿದ್ದು, ಆಯುರ್ವೇದೇತರ ವ್ಯಕ್ತಿಯೂ ಅರ್ಥಮಾಡಿಕೊಳ್ಳಬಹುದಾದ ಸರಳ ಭಾಷೆಯಲ್ಲಿದೆ.
ಆಯುರ್ವೇದದ ಜ್ಞಾನದ ಕಂಪನ್ನು ಪ್ರತಿ ಮನಕ್ಕೂ ಮುಟ್ಟಿಸಲು EasyAyurveda.com ನಲ್ಲಿ 2009 ರಿಂದಲೂ ಆಂಗ್ಲಭಾಷೆಯಲ್ಲಿ ಆಯುರ್ವೇದ ಸಂಬಂಧಿ ಸಾವಿರಾರು ಲೇಖನಗಳನ್ನು ನಾವು ಬರೆದಿದ್ದೇವೆ. ಆದರೆ ಕನ್ನಡಿಗರಾದ ನಮಗೆ ಇಷ್ಟು ವರ್ಷಗಳವರೆಗೂ ಸುಮಧುರ ಕನ್ನಡ ಭಾಷೆಯಲ್ಲಿ ಯಾವುದೇ ಆಯುರ್ವೇದ ಸಂಬಂಧಿತ ಸೇವೆಯನ್ನು ಅರ್ಪಿಸಲು ಸಾಧ್ಯವಾಗಿರಲಿಲ್ಲ. ಈ ಸಲುವಾಗಿ ಮುಂದಿನ ಪ್ರಯತ್ನವೆಂಬಂತೆ “ಆಯುರ್ವೇದ ಸಾಂತ್ವನ” ಎಂಬ ಪುಸ್ತಕವನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ.
ಪುರಾತನ ಭಾರತೀಯ ವೈದ್ಯಕೀಯ ವಿಜ್ಞಾನ – ಆಯುರ್ವೇದದ ತತ್ತ್ವಗಳನ್ನು ಆಧರಿಸಿ ಆರೋಗ್ಯಕರ ಜೀವನಶೈಲಿಯನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬ ವಿಚಾರದ ಕುರಿತು ಈ ಪುಸ್ತಕವು ನಿಮಗೆ ಮಾರ್ಗದರ್ಶನ ನೀಡುತ್ತದೆ.
ಚರಕ ಸಂಹಿತಾ, ಸುಶ್ರುತ ಸಂಹಿತಾ, ಅಷ್ಟಾಂಗ ಹೃದಯ, ಭಾವಪ್ರಕಾಶ, ಭೋಜನ ಕುತೂಹಲಂ ಇತ್ಯಾದಿ ಆಯುರ್ವೇದ ಗ್ರಂಥಗಳ ಉಲ್ಲೇಖಗಳೊಂದಿಗೆ ದೈನಂದಿನ ಜೀವನಕ್ಕೆ ಉಪಯುಕ್ತ ಮಾಹಿತಿಗಳ ಸಂಗ್ರಹ ಈ ಪುಸ್ತಕ.
ಅಡುಗೆಮನೆಯ ಪದಾರ್ಥಗಳಾದ ಶುಂಠಿ, ಮೆಂತ್ಯ, ಹಸುವಿನ ಹಾಲು ಮತ್ತು ಮೇಕೆ ಹಾಲು,
ಸಾಮಾನ್ಯವಾಗಿ ಮನೆಮದ್ದಿನಲ್ಲಿ ಬಳಸುವ ತುಳಸಿ, ಪುದೀನ, ಮಾವಿನಶುಂಠಿ, ಸೊಗದೇಬೇರು, ಭದ್ರಮುಷ್ಟಿ ಇತ್ಯಾದಿ ಸಸ್ಯಗಳ ಶಾಸ್ತ್ರೀಯ ಮಾಹಿತಿ,
ಷಡ್ ಬಿಂದು ತೈಲ, ಮುರಿವೆಣ್ಣ, ಬ್ರಾಹ್ಮೀ ವಟಿ, ವಾಯು ಮಾತ್ರೆ, ಅವಿಪತ್ತಿಕರ ಚೂರ್ಣ, ಸಪ್ತಾಮೃತ ಲೋಹ, ಗುಡೂಚ್ಯಾದಿ ಕಷಾಯ, ಗಂಧಕವಟಿ ಮತ್ತು ಗಂಧಕ ರಸಾಯನ, ಕೈಶೋರ ಗುಗ್ಗುಳು ಮುಂತಾದ ಆಯುರ್ವೇದ ಔಷಧಗಳ ವಿವರಣೆ,
ಸಂಧಿವಾತ, ಬೊಜ್ಜು, ಮೈಗ್ರೇನ್ ತಲೆನೋವು, ಅಸ್ತಮಾ, ಅಧಿಕ ರಕ್ತದೊತ್ತಡ, ಮಹಿಳೆಯರ ಪಿ.ಸಿ.ಓ.ಡಿ. ಸಮಸ್ಯೆ, ಉರಿಮೂತ್ರ ಇತ್ಯಾದಿ ಕಾಯಿಲೆಗಳ ಸಂಕ್ಷಿಪ್ತ ಮಾಹಿತಿ,
ನಸ್ಯ, ಮಸಾಜು, ಆಯಿಲ್ ಪುಲ್ಲಿಂಗ್ ಇತ್ಯಾದಿ ಚಿಕಿತ್ಸಾ ವಿಧಾನಗಳ ಸಮರ್ಪಕ ಕಾರ್ಯವಿಧಾನ ಹಾಗೂ ಪ್ರಯೋಜನಗಳು,
ಗರ್ಭಿಣಿ, ಬಾಣಂತಿಯರ ಆರೈಕೆ, ಮುಂತಾದ ಹತ್ತು ಹಲವು ವಿಚಾರಗಳು ಈ ನಮ್ಮ ಹೊಸ ಪುಸ್ತಕ “ಆಯುರ್ವೇದ ಸಾಂತ್ವನ” ದಲ್ಲಿದೆ.
ಈ ಪುಸ್ತಕವನ್ನು ಖರೀದಿಸಿ, ನಮ್ಮನ್ನು ಪ್ರೋತ್ಸಾಹಿಸಲು ಕೆಳಗಿನ ಲಿಂಕನ್ನು ಒತ್ತಿ.
Disclaimer: The information provided is only for the purpose of education. Do not use the information for self-medication or treating others. Always consult your doctor before trying any remedies, lifestyle modifications or medicines.
Learn Ayurveda Step by Step with Dr JV Hebbar.
Sign up for video classes
Copyright 2023 © All rights Reserved.